Page load depends on your network speed. Thank you for your patience. You may also report the error.

Loading...

Shri Adi Shankara's Prashnottara Ratna Malika (Kannada)

 

Adi Shankara

ಪೂಜ್ಯರೇ ಯಾವುದನ್ನು ಪಡೆಯಬೇಕು ?

>ಗುರು ಹಿರಿಯರ ಮಾತನ್ನು ಮಾರ್ಗದರ್ಶನವನ್ನು  ಪಡೆಯಬೇಕು .


ಹಿತಕರವಾದದ್ದು
ಯಾವುದು ?

>ಧರ್ಮವು (ಕರ್ತವ್ಯವು ) ಹಿತಕರವಾದದ್ದು.


ವಿಷವು
ಯಾವುದು ?

>ಗುರು-ಹಿರಿಯರಿಗೆ ಮಾಡಿದ ಅವಮಾನ,ಅಗೌರವವೇ ವಿಷವು 


  
ಮನುಷ್ಯನಲ್ಲಿ ಹೆಚ್ಚಾಗಿ ಅಪೇಕ್ಷಿಸುವುದು ಯಾವುದು ?

>ತನ್ನ ಮತ್ತು ಇತರರ ಒಳ್ಳೆಯದರಲ್ಲಿ ತೊಡಗಿಸಿದ ಜೀವನವು ಮಾನವನಲ್ಲಿ 

ಹೆಚ್ಚು ಅಪೇಕ್ಷಿತ .


ಮತ್ತೆ
ಕಳ್ಳರು ಯಾರು ?

>ಸುಖಪಭೋಗ ವಸ್ತುಗಳೇ ಕಳ್ಳರು (ಅವು ಇಂದ್ರಿಯಗಳ ಮೂಲಕ ಮನಸನ್ನು 

ಅಪಹರಿಸುತ್ತವೆ 


ವ್ಯೆರಿಯು
ಯಾರು ?

>ನಿರುದ್ಯೋಗವೇ (ಕೆಲಸವಿಲ್ಲದಿರುವುದೇ) ವ್ಯೆರಿಯು .

  

ಘನತೆಯ ಮೂಲವು ಯಾವುದು ?

>ಬೇಡದೇ ಇರುವುದೆಂಬುದೇ ಘನತೆಯ ಮೂಲವು (ಇತರರನ್ನು ಯಾವುದನ್ನೂ ಬೇಡುವುದು )


ಯಾವುದಕ್ಕೆ
ದುಃಖ ವೆನ್ನಬೇಕು ?

>ಸಂತೋಷ ವಿಲ್ಲದಿರುವುದೇ  ದುಖವು 


 
ಆಲಸ್ಯತನವು ಯಾವುದು ?

>ನಿಪುಣನಾದವನು (ವಿದ್ವಾಂಸ ನಾದವನು )ಅಧ್ಯಯನ ಮಾಡದಿರುವುದು ಆಲಸ್ಯ 


 
ಕಮಲದ ಎಲೆಯ ಮೇಲಿನ ನೀರಿನಂತೆ ಚಂಚಲವಾದದ್ದು ಯಾವುದು ?

>ತಾರುಣ್ಯ,ಸಂಪತ್ತು ಮತ್ತು ಆಯುಷ್ಯ ಇವು ಕಮಲದ ಎಲೆ ಮೇಲಿನ ನೀರಿನಂತೆ ಚಂಚಲವಾದದ್ದು (ಅನಿಷ್ಟಿತ ವಾದದ್ದು )


 
ಬೆಲೆ ಕಟ್ಟಲಾಗದ್ದು ಯಾವುದು ?

>  ಸರಿಯಾದ ಸಂದರ್ಭ ಕೊಟ್ಟಿದ್ದು 


 
ಸಾಯುವವರೆಗೂ ಬಾಣದಂತೆ ಚುಚ್ಚುತ್ತಲೇ ಇರುವುದು ಯಾವುದು ?

>ಬಚ್ಚ್ಚಿಟ್ಟು ಕೊಂಡ ಪಾಪಕಾರ್ಯವು ಸಾಯುವವರೆಗೂ ಬಾಣದಂತೆ ಚುಚ್ಚತ್ತಲೇ ಇರುತ್ತದೆ .

 

 ಯಾವ ವಿಷಯದಲ್ಲಿ ಪ್ರಯತ್ನವನ್ನು  ಮಾಡಬೇಕು ?

>ವಿಧ್ಯಾಭ್ಯಾಸದಲ್ಲಿ ,ಒಳ್ಳೆಯ ಔಷದೊಪಚಾರದಲ್ಲಿ ಮತ್ತು ದಾನ ಮಾಡುವಲ್ಲಿ ಪ್ರಯತ್ನ ಮಾಡಬೇಕು 

 

ಜಗತ್ತನ್ನು ಯಾರು ಗೆಲ್ಲುತ್ತಾರೆ ?(ವಿಶ್ವದಲ್ಲಿ ಯಶಸ್ಸನ್ನು ಹೊಂದುವವರು ಯಾರು)

> ಸತ್ಯ ಮತ್ತು ಸಹನೆ ಗಳಿಂದ ಕೂಡಿದ ಮನುಷ್ಯನು ಜಗತ್ತನ್ನು ಗೆಲ್ಲುತ್ತಾನೆ 

 

ಪ್ರಾಣಿ ಸಮೂಹವು ಯಾರ ಅಧೀನದಲ್ಲಿರುತ್ತದೆ ?

>ಪ್ರಾಣಿ ಸಮೂಹವು ಸತ್ಯವದುದನ್ನು ಮತ್ತು ಪ್ರಿಯವಾದುದನ್ನು ಮಾತನಾಡುವ ವಿನಯಶಾಲಿಯ ವಶದಲ್ಲಿ ಇರುತ್ತದೆ 

 

 

ಎಲ್ಲಿ  ಸ್ಥಿರವಾಗಿ  ನಿಲ್ಲಬೇಕು   ?

>ದೃಷ್ಟ ಮತ್ತು ಅದೃಷ್ಟ (ಕಂಡು ಕಾಣದ )ಲಾಭದಿಂದ ಸಮೃದ್ಧವಾದ ನ್ಯಾಯಯುತವಾದ ಮಾರ್ಗ ದಲ್ಲಿ ಸದಾ  ಉಳಿಯಬೇಕು 

 

ದಾನವು ಯಾವುದು ?

 ಪ್ರತಿಯಾಗಿ ಏನನ್ನೂ ಬಯಸದೆ ಮಾಡಿದ ದಾನವೇ ನಿಜವಾದ ದಾನವು

 

(ನಿಜವಾದ) ಮಿತ್ರನು ಯಾರು ?

ಪಾಪ ಕಾರ್ಯಗಳನ್ನು ಮಾಡದಂತೆ ತಡೆಯುವನು ನಿಜವಾದ ಮಿತ್ರನು

 

ದುಃಖಕರವಾದುದು  ಯಾವುದು ?

ದಾರಿದ್ರ್ಯವು (ಬಡತನವು) ಕಷ್ಟಕರವಾದದ್ದು (ದುಃಖಕರವಾದದ್ದು)  

 

 ಎಂಥ ದೇಶದಿಂದ ದೂರ ಇರಬೇಕು ?

ಕ್ರೂರರಾದ ಪ್ರಜೆಗಳುಳ್ಳ  ಮತ್ತು ಲೋಭಿಯಾದ ರಾಜನುಳ್ಳ ದೇಶವನ್ನು ತೊರೆಯಬೇಕು 

  

ವಿಶ್ವದಲ್ಲಿ ಶೋಚನೀಯನು ಯಾರು ?

ಸಂಪತ್ತು ಇದ್ದರೂ ದಾನಿಯಾಗಿರದವನು ಶೋಚ್ಯನು  

 

ಹಗಲಿರುಳು (ಸದಾಕಾಲವೂ )ಯಾವುದನ್ನು ಕುರಿತು ಚಿಂತಿಸಬೇಕು ?

ಹಗಲಿರುಳು ಪರಮಾತ್ಮನ ಚರಣದ ಚಿಂತೆ ಮಾಡಬೇಕೇ ವಿನಃ ಸಂಸಾರವನ್ನಲ್ಲ

 

ಮಾನವರು ಏನನ್ನು ಸಂಪಾದಿಸಬೇಕು ?

ಮಾನವರು ವಿದ್ಯೆ ,ಸಂಪತ್ತು ,ಬಲ ,ಕೀರ್ತಿ ಮತ್ತು ಪುಣ್ಯಗಳನ್ನು ಸಂಪಾದಿಸಬೇಕು

 

ಎಲ್ಲ ಗುಣಗಳನ್ನು ನಾಶಪಡಿಸುವಂಥಹದು ಯಾವುದು ?

ಲೋಭವು ಸರ್ವ ಗುಣಗಳನ್ನು ನಾಶ ಪಡಿಸುವಂತಹದು  

 

ಎಲ್ಲ  ಗುಣಗಳನ್ನು ನಾಶಪಡಿಸುವಂಥಹುದು ಯಾವುದು ?

>ಲೋಭವು ಎಲ್ಲಾ  ಒಳ್ಳೆ ಗುಣಗಳನ್ನೂ ನಾಶಪಡಿಸುವಂತಹುದು  .

   

ವೈರಿಯು ಯಾರು ?

ಕಾಮವೇ ವೈರಿಯು .

೨೮


ಸಂರಕ್ಷಿ
ಸಲ್ಪಡತಕ್ಕಂಥಹದು ಯಾವುದು

>ಕೀರ್ತಿ ,ಪತಿವ್ರತೆ ಮತ್ತು ಸ್ವಂತ ಬುದ್ಧಿ (ಸ್ವಂತ ವಿಚಾರ ಶಕ್ತಿ ) ಇವು ಸಂ ರಕ್ಷಿಸಲು ಅರ್ಹ .

 

ಜಗತ್ತಿನ್ನಲ್ಲಿ ಕಲ್ಪಲತೆ ಯಾವುದು ?(ಬೇಡಿದ್ದನ್ನು ,ಬಯಸಿದ್ದನ್ನು ಕೊಡುವ ಬಳ್ಳಿ )

>ಒಳ್ಳೆಯ ಶಿಷ್ಯನಿಗೆ ಗುರುವು  ನೀಡಿದ ವಿದ್ಯೆಯು  ಜಗತ್ತಿನ್ನಲ್ಲಿ  ಕಲ್ಪಲತೆಯು .

 

ಪಾತಕವು ಯಾವುದು ?

>ಹಿಂಸೆಯೇ(ಕ್ರೂರತೆ)   ಪಾತಕವು.

  

ಒಳ್ಳೆಯವನಿಗೆ ಸಾವಿಗಿಂತಲೂ  ಹೆಚ್ಚು ದುಃಖದಾಯಕ  ಯಾವುದು ?

>ಅಪಕೀರ್ತಿಯು ಮರಣ ಕಿಂತಲೂ  ಹೆಚ್ಚು ದುಃಖದಾಯಕ.

 

ಯಾರು ಪ್ರಗತಿ ಯನ್ನು ಹೊಂದುತ್ತಾರೆ ?

>ವಿನಮ್ರ ನಾದವನು (ವಿನಯಶಾಲಿಯು ) ಪ್ರಗತಿಯನ್ನು  ಹೊಂದುತ್ತಾನೆ .

 

ದೇಹಿಗಳಿಗೆ (ಮನುಷ್ಯರಿಗೆ) ಭಾಗ್ಯವು ಯಾವುದು ?

>ಆರೋಗ್ಯವೇ ಭಾಗ್ಯವು .

 

ಎಲ್ಲರ ಬದುಕಿಗೆ ಕಾರಣನು ಯಾರು ?

>ಪರ್ಜನ್ಯನು (ಮಳೆ ) ಸಮಸ್ತ ಬದುಕಿಗೆ ಕಾರಣನು .

 

ಶೂರನು ಯಾರು ?

>  ಭೀತನಾದವನನ್ನು ಕಾಪಾಡುವವನು ಶೂರನು .

 

ಮತ್ತೆ  ಕಾಪಾಡುವವನು ಯಾರು ?

>ರಕ್ಷಿಸುವ ಗುರುವು .

   

ಪ್ರತ್ಯಕ್ಷ(ಸಾಕ್ಷಾತ್ )  ದೇವತೆ ಯಾರು ?

>ತಾಯಿಯೇ ಪ್ರತ್ಯಕ್ಷ ದೇವತೆಯು .

 

ಪೂಜ್ಯ ಗುರುವು ಯಾರು ?

ತಂದೆಯೇ ಪೂಜ್ಯ ಗುರುವು .

 

ಅನ್ನದಾನಕ್ಕೆ ಅರ್ಹನಾರು ?

>ಹಸಿದವನು ಅನ್ನದಾನಕ್ಕೆ ಅರ್ಹನು .